Thursday, March 1, 2018

ಯುಗಾಂತ್ಯದ ಲಕ್ಷಣಗಳೇ???

*ನಡೆಯು ತ್ತಿರುವುದೆಲ್ಲಾ ಯುಗಾಂತ್ಯದ ಲಕ್ಷಣಗಳೇ ???* 

ದ್ವಾಪರ ಯುಗದ ಅಂತ್ಯದಲ್ಲಿ ಒಂದೇ ಸೂರಿನಡಿಯಲ್ಲಿರಬೇಕಾಗಿದ್ದ ದಾಯಾದಿಗಳು ಹೆಣ್ಣಿಗಾಗಿ ಅಥವಾ ಹೆಣ್ಣಿನ ಕಾರಣಕ್ಕಾಗಿ ಮತ್ತು ಮಣ್ಣಿಗಾಗಿ ಬಡಿದಾಡಿಕೊಂಡು ಶಿಷ್ಯರು ,ಕಿರಿಯರು ಕಣ್ಣೆದುರೇ ಗುರು , ಹಿರಿಯರ ಸಾವನ್ನು ಕಂಡರು..ತಂದೆ ತಾಯಿಯರು ಮಕ್ಕಳ ಮೊಮ್ಮಕ್ಕಳ ಸಾವನ್ನು ಕಂಡರು ,ಹಾಗೆಯೇ ಮಕ್ಕಳು ಮೊಮ್ಮಕ್ಕಳು ತಮ್ಮ ತಂದೆ ತಾತಂದಿರ ಸಾವನ್ನು ಕಂಡರು ಯಾರು ಯಾರನ್ನು ಪ್ರೀತಿಸಿ ಪಾಲಿಸಬೇಕಿತ್ತೋ ಅಂಥವರೇ ಸಾವಿಗೆ ಕಾರಣರಾದರು ಶುಭ ಕಾರ್ಯಗಳು ನಡೆಯಬೇಕಿದ್ದಲ್ಲಿ ಅಶುಭ ಕಾರ್ಯಗಳು ನಡೆಯುವಂತಾಯಿತು ..ಮನೆಮಂದಿಯಲ್ಲಿ ಕಲಹ, ಕಾರಣ ವಿಚಾರಗಳಿಲ್ಲದೆ ನಡೆದ ಯಾದವೀ ಕಲಹ ಕೊನೆಯಲ್ಲಿ ಎಲ್ಲರೂ ಮಣ್ಣಲ್ಲಿ ಮಣ್ಣಾಗಿ ಹೋಗುವಂತಾಯಿತು. ದ್ವಾಪರ ಮಾತ್ರವಲ್ಲ ಕೃತ ,ತ್ರೇತೆಯಲ್ಲೂ ಹೆಚ್ಚು ಕಮ್ಮಿ ಹೀಗೆಯೇ ನಡೆಯಿತು.. ಕೊನೆಯ ಕಾಲದಲ್ಲಿ ಮರ್ಯಾದಾ ಪುರುಷೋತ್ತಮ ,ರಘುವಂಶ ಲಲಾಮನಾದ ಶ್ರೀರಾಮನೂ ಹೇಳಿದ್ದು ಅದನ್ನೇ

..." *ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು ..* ಕೊನೆಯ ಬಾರಿಗೆ ಅಪ್ಪಿಕೊಳ್ಳೋ ಎನ್ನ ಮೋಹದಿಂದಾ ..ಎಂದು ತಮ್ಮನಾದ ಲಕ್ಷ್ಮಣನಲ್ಲಿ ಹೇಳಿದನಂತೆ ..ಹಾಗೆ ಆ ದೇವನಾದ ಮಾನವಾಧಿಪತಿಗೂ ಗೊತ್ತಾಗಿತ್ತು ಶೀಘ್ರದನ್ನೇ ತನ್ನ ಅಂತ್ಯವಾಗುತ್ತದೆ ಎಂದು ..

ಅಂತೆಯೇ *ದ್ವಾಪರೆಯಲ್ಲಿ* ಮಾನವರೂಪಿಯಾದ *ಶ್ರೀಕೃಷ್ಣ ಪರಮಾತ್ಮನೇ* ಜರನೆಂಬ ಬೇಡನಿಂದ ಬಿಡಲ್ಪಟ್ಟ ಬಾಣ ಕಾಲಿಗೆ ತಾಗಿ ರಕ್ತಸ್ರಾವದಿಂದಲಾಗಿ ಸಾವನ್ನು ಕಂಡುಕೊಳ್ಳುವಂತಾಯಿತು ಎಂದರೆ ಇದೆಲ್ಲ ಕೇವಲ ನೆಪ ಮಾತ್ರ ..ಒಳಿದುದೆಲ್ಲವೂ ಜಗನ್ನಿಯಾಮಕನ ಇಚ್ಛೆ ಯಂತೆಯೇ ನಡೆಯುತ್ತದೆ ಎಂದರೆ ತಪ್ಪಾಗಲಾರದು ..

 *ಇಲ್ಲವೆಂದಾದರೆ* .....

ಈ ಕಲಿಯುಗದಲ್ಲಿ ಹೀಗೆಲ್ಲ ಆಗುವುದಕ್ಕಿದೆಯೇ ಪ್ರತಿ ದಿನವೂ ..ದಿನ ದಿನವೂ ..ನಮ್ಮವರು ನಮ್ಮ ಪ್ರೀತಿ ಪಾತ್ರರು ..ಆತ್ಮೀಯರು ..ಒಡ ಹುಟ್ಟಿದವರು ..ಮಿತ್ರರು ಇನ್ನಿಲ್ಲವಾಗುತ್ತಿದ್ದಾರೆ ..ರೋಗ ..ಅಪಘಾತ ನಮ್ಮವರನ್ನು ಕಳೆದುಕೊಳ್ಳುವ ಆ ರೋದನೆ..ದುಃಖ ..ನಿರಂತರ ಹುಟ್ಟಿಸಿದ ತಂದೆ ತಾಯಂದಿರು ತಮ್ಮ ಮಕ್ಕಳ ಮೊಮ್ಮಕ್ಕಳ ಸಾವನ್ನು ಕಾಣುವಂತಹ ಸಮಯ ಇದಾಗುತ್ತಿದೆ *ಪುತ್ರ ಶೋಕಂ ನಿರಂತರಂ ..* ಅನುಭವಿಸಿದವರಿಗೆ ಗೊತ್ತು ಯಾರಿಗೂ ಬಾರದಿರಲಿ ..ಎಲ್ಲವೂ ನೆವನ ..ನೆಪ ಮಾತ್ರ ಕಾಲನ ಕರೆ ಬಂದಾಗ ಎಲ್ಲರೂ ಎಲ್ಲವರೂ ಹೋಗಲೇ ಬೇಕು ....

ಆದರೆ ಇಂದು ನಡೆಯುತ್ತಿರುವುದು ಸ್ವಯಂ ಕೃತಾಪರಾಧ ಅಲ್ಲದೆ ಮತ್ತಿನ್ನೇನು ??? . *ಗುರು ..ಗುರು ಪೀಠ .ಹೆಣ್ಣೊಬ್ಬಳು ನೆಪ ಮಾತ್ರ* .ಸಮಾಜ ಶಿಷ್ಯರನ್ನು ಮುನ್ನಡೆಸಬೇಕಾದ ಅತ್ಯುನ್ನತ ಸ್ಥಾನದಲ್ಲಿ ಇರುವ ಶ್ರೇಷ್ಟ್ಟ ಪರಂಪರೆ , ಪೀಠದಲ್ಲಿರುವ ದೈವ ಸಮಾನರಾದ ಗುರುವೊಬ್ಬರ ಮೇಲೆ ಗುರುತರವಾದ ಆಪಾದನೆ ಓಲೈಸುತ್ತಿದ್ದವರೇ ದೂರ ಮಾಡಿದರು ಜೊತೆಗಿದ್ದವರೇ ದೂರಾದರು ಬಂಧುಗಳು ದೂರವಾದರು ಬಾಂಧವರು ಮುಖ ತಿರುಗಿಸುವಂತಾಯಿತು .ದೊಡ್ಡಪ್ಪ ಚಿಕ್ಕಪ್ಪ ಅಪ್ಪ ಮಕ್ಕಳು..ಅಣ್ಣ ತಮ್ಮ ಅಕ್ಕ ತಂಗಿ ..ಗಂಡ ಹೆಂಡತಿ ಎಲ್ಲ ಬಿಡಿ ..ಗುರಿಕಾರರು ಇಲ್ಲದ ಸಮಾಜ ..ಪುರೋಹಿತರು ಬಾರದ ಮನೆಗಳು ..ಆ ಶಿಷ್ಯ ವರ್ಗ ..ಊಹಿಸಲೂ ಆಗದ ಆಲೋಚನೆಗೂ ಸಿಗದ ಸಮಾಜ ..ಒಬ್ಬೊಬ್ಬರು ಒಂದೊಂದು ಕಡೆ ..ಕೋರ್ಟು ..ಕೇಸು ..ಬಹಿಷ್ಕಾರ ..ಹೀಗಳೆಯುವಿಕೆ ..ಎಲ್ಲ ಹಿರಿಯ ಗುರು ಪೀಠದವರು ಸೇರಿ ಆಪಾದಿತರಿಗೆ ಬಹಿಷ್ಕಾರ ..
ಅದೇ ಆಪಾದಿತರಿಂದ ಪುನಃ..ಮತ್ತೆ..ಮತ್ತೆ ಅದೇ ತಪ್ಪು ..ಜಗದ್ಗುರುಗಳ ನಿಂದನೆ ಕೇಳುವುದಕ್ಕಾಗೋದಿಲ್ಲ ..ನೋಡೋದಕ್ಕೂ ಉಹುಂ...ಇಲ್ಲಾ ..
ಇದೇಗುರುಗಳು ಒಂದೊಮ್ಮೆಗೆ ತಮ್ಮದೇ ಆಶೀರ್ವಚನದಲ್ಲಿ ಹೇಳಿದ್ದು ಕೇಳಿದ ನೆನಪಾಗುತ್ತಿದೆ .. *"ಅನ್ಯ ಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ! ..ಪುಣ್ಯ ಕ್ಷೇತ್ರೇ ಕೃತಂ ಪಾಪಂ ವಜ್ರ ಲೆಪೋ ಭವಿಷ್ಯತಿ !!"* ಇದು ಯಾರಿಗೆ ? ಸಾಮಾನ್ಯರಿಗೆ ಮಾತ್ರವೆಯಾ ಅನ್ವಯಿಸುವುದು ? ಅಲ್ಲವೆಂದಾದರೆ ಹೀಗೆಲ್ಲ ಆಗುವುದಕ್ಕಿದೆಯಾ ? ಆಗಬೇಕಿತ್ತಾ ? ಹಿರಿಯರು , ವೇದ ಶಾಸ್ತ್ರ ಓದಿ ಬಲ್ಲವರೂ, ಜ್ಞಾನಿಗಳು, ಹೃದಯ ಶ್ರೀಮಂತಿಕೆ ಇರುವವರು ,ತತ್ವ ಜ್ಞಾನಿಗಳು ,ಮೇಧಾವಿಗಳು ..ಅಲ್ಲ ಕೇವಲ ಒಳ್ಳೆಯ ಮನಸ್ಸಿರುವವರು ಒಮ್ಮೆ ಯೋಚಿಸಿ ..ಆಲೋಚಿಸಿ ..ತಪ್ಪಿರುವುದನ್ನು ಒಪ್ಪಿ ..ಬಿಟ್ಟವರನ್ನು ಅಪ್ಪಿ .. ಅಲ್ಲ ತಪ್ಪಿದ್ದನ್ನು ಸರಿಪಡಿಸಿ . ಆಗದು ಆಗದೆ ಆಗದು ಯಾಕೆ ಆ ದೇವರೇ ಪ್ರತ್ಯಕ್ಷನಾಗಿ ಬಂದರೂ ಆಗದ ಮಾತು ..ಒಪ್ಪುವವರ ಒಪ್ಪರು ..ದೇವರನ್ನೂ ನಿಂದಿಸಿಯಾರು . *ಮಾನವ ಜನುಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚರಿರಾ...* ಇಲ್ಲವೆಂದಾದರೆ ಈಗ ಹುಟ್ಟಿದ..ಅಲ್ಲ ..ಬೆಳೆಯುತ್ತಿರುವ ಸಣ್ಣ ಸಣ್ಣ ಮಕ್ಕಳೂ ಕೇಳುವಂತಾಯಿತು ಯಾಕೆ ಹೀಗೆ ಎಂದು .. ಅವರಿಗೆ ಹೇಳುವ ನೈತಿಕತೆಯನ್ನು ನಾವೆಲ್ಲವರೂ ಅಂದರೆ ಈಗಿನ ಕಾಲ ಘಟ್ಟದಲ್ಲಿ ಇರುವ *ಅಬಾಲವೃದ್ಧರಾದಿಯಾಗಿ* ಎಲ್ಲರೂ ಅಂದರೆ ಯುವಕರು ಹಿರಿಯರು ವೃದ್ಧರು ಎಲ್ಲರೂ ಈಗಿನ ಈ *ವ್ಯತಿರಿಕ್ತವಾದ ಅನಿಶ್ಚಿತತೆಗೆ ಕಾರಣೀಭೂತರು ಹೌದೇ ಹೌದು .. ಮುಂದಿನ ವಂಶ ವಾಹಿನಿಗೆ ಉತ್ತರವನ್ನು ಕೊಡುವಂತಾಗಲಿ .* .ಇದುವೇ ಅಂದರೆ ನಮ್ಮ *ಈ ಕಾಲವೇ ಕಲಿಯುಗದ ಅಂತ್ಯವಾಗದಿರಲಿ* ನಮ್ಮ ಮಕ್ಕಳು ಮೊಮ್ಮಕ್ಕಳನ್ನು ಸ್ನೇಹ ಬಾಂಧವ್ಯ ಪ್ರೀತಿಯಿಂದ ಕಾಣುವಂತಾಗಲಿ ಹಾಗೆಯೇ *ನಮಗೆ ನಮ್ಮ ತಾತ ಮುತ್ತಾತಂದಿರಿಗೆ ದೊರಕಿದ ಆ ಯೋಗ ಭಾಗ್ಯ* ಅವರಿಗೂ ಅಂದರೆ ನಮ್ಮ *ಪುತ್ರ ಪೌತ್ರಾದಿಗಳಿಗೂ* (ಮಕ್ಕಳು ಮೊಮ್ಮಕ್ಕಳಿಗೂ ) ಲಭಿಸಲಿ ಎಂದು ಆ ಸೃಷ್ಟಿಕರ್ತನಲ್ಲಿ ಹಾಗೂ ಜಗನ್ನಿಯಾಮಕನಲ್ಲಿ ಸಂಪ್ರೀತಿಯಿಂದ ಕರಜೋಡಿಸಿ ಪ್ರಾರ್ಥನೆ ..

 *ಸರ್ವ ಬಾಧಾಪಶಮನಂ ತ್ರೈಲೋಕ್ಯ ಅಖಿಲೇಶ್ವರೀ*

 *ಮೃತ್ಯೋರ್ಮಾ ಅಮೃತಂಗಮಯ* 

 *ಲೋಕಾ ಸಮಸ್ತಾ ಸುಖಿನೋಭವಂತು ..ಓಂ ಶಾಂತಿ**